ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 10, 2020

CRIME INCIDENTS 09-02-2020


ದಿನಾಂಕ. 08-02-2020 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ಪೋತಿಯಾದ ಗೂಳಪ್ಪ ತಂದೆ ದುರಗಪ್ಪ ಮಜ್ಜಗಿ ವಯಾ-54 ವರ್ಷ ಜಾತಿ ಹಿಂದೂ ಕುರುಬರ ಉದ್ಯೋಗ -ಒಕ್ಕಲುತನ ಸಾ|| ಬೆಳವಟಗಿ ಗ್ರಾಮ ಈತನು ದಿನಾಂಕ: 08-02-2020 ರಂದು ಸಾಯಂಕಾಲ 07-15 ಗಂಟೆಯ ಸುಮಾರಿಗೆ ತನ್ನ ಟಿ.ವ್ಹಿ.ಎಸ್ ಎಕ್ಸ್.ಎಲ್  100 ಮೋಟಾರ್ ಸೈಕಲ್  ಚೆಸ್ಸಿ ನಂ-MD621JP14K1L00589 ಇಂಜಿನ್ ನಂ: CP1LK1103241 ನೇದ್ದನ್ನು ತಾನೇ ನವಲಗುಂದ ಕಡೆಯಿಂದ ಬೆಳವಟಗಿ ಕಡೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿ ನವಲಗುಂದ ನರಗುಂದ ರಸ್ತೆಯಲ್ಲಿರುವ ಆನೆಗುಂದಿಯವರ ರವಾ ಮಿಲ್ ಮುಂದಿನ ರಸ್ತೆಯ ಮೇಲೆ ಗಾಡಿಯ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ತಲೆಗೆ ಭಾರಿ ಗಾಯಪಡಿಸಿಕೊಂಡಿದ್ದು ಸದರಿಯವನನ್ನು ಚಿಕಿತ್ಸೆಗಾಗಿ ನವಲಗುಂದ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:09-02-2020 ರಂದು ಮುಂಜಾನೆ 07-50 ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ನಂಬರ:KA-25/F-2927 ನೇದ್ದರ ಚಾಲಕ ಶರಣಪ್ಪ ಗೂಳಪ್ಪ ಬೆಟಗೇರಿ ಸಾ:ಖನ್ನೂರ ತಾ:ನವಲಗುಂದ ಜಿ:ಧಾರವಾಡ ಇತನು  ಸದರ ಬಸನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ, ತನ್ನ ಮುಂದೆ ಅದೇ ಮಾರ್ಗದಲ್ಲಿ ರಸ್ತೆಯ ಎಡಸೈಡಿನಲ್ಲಿ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಹೊಂಡಾ ಶೈನ ಮೋಟಾರ ಸೈಕಲ ನಂ:KA-25/Y-6399 ನೇದ್ದರ ಹಿಂದುಗಡೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟಾರ ಸೈಕಲ ಸವಾರ ಮೊಹೀಜ ಮಕ್ಬುಲಸಾಬ ಕರಿಕಟ್ಟಿ ಸಾ: ದಾನೊ ನಗರ ಅತ್ತಿಕೊಳ್ಳ ಧಾರವಾಡ ಇತನಿಗೆ ಮತ್ತು ಮೋಟಾರ ಸೈಕಲ ಹಿಂಬದಿ ಸವಾರ  ಕಾಸಿಮ್  ತಂದೆ ಮಹ್ಮದ ಅಜೀಮ್ ಶೇಖ ಸಾ: ದಾನೊ ನಗರ ಅತ್ತಿಕೊಳ್ಳ ಧಾರವಾಡ  ಇವರಿಗೆ ಗಂಬೀರ ಗಾಯಪಡಿಸಿ, ಅದರಲ್ಲಿ ಗಾಯಾಳು ಕಾಸಿಮ ಮಹ್ಮದ ಅಜೀಜ ಶೇಖ ಇತನು ಕಿಮ್ಸ ಆಸ್ಪತ್ರೆಯಲ್ಲಿ ವೈದ್ಯೋಪಚಾರ ಪಡೆಯುತ್ತಿರುವಾಗ ವೈದ್ಯೋಪಚಾರ ಪಲಿಸದೇ ಮದ್ಯಾಹ್ನ 1-50 ಗಂಟೆ ಸುಮಾರಿಗೆ ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 04-02-2020 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ಪಿರ್ಯಾದಿದಾರರ ತಾಯಿಯಾದ ಚೆನ್ನವ್ವ ಕೋಂ ಬಸನಗೌಡ ಪಕ್ಕೀರಗೌಡ್ರ @ ಪಾಟೀಲ ವಯಾ 84 ವರ್ಷ ಇವಳು ಜಳಕ ಮಾಡಿ ಚಳಿ ಇದದ್ದುರಿಂದ ಓಲೆಯ ಮುಂದೆ ಬೆಂಕಿ ಕಾಯಿಸುತ್ತಾ ಕುಳಿತುಕೊಂಡಾಗ ಆಕಸ್ಮಾತಾಗಿ ನಿದ್ದೆ ಬಂದಾಂತಾಗಿ ಬೆಂಕಿಯಲ್ಲಿ ಬಿದ್ದಾಗ ಉಟ್ಟುಕೊಂಡ ಬಟ್ಟೆಗೆ ಬೆಂಕಿ ಹತ್ತಿ ಬಲಗಡೆ ದುಬ್ಬಕ್ಕೆ, ಬಲಗಡೆ ಕಾಲಿಗೆ, ಬಲಗಡೆ ಕೈಗೆಗೆ ಸುಟ್ಟುಕೊಂಡು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ: 08-02-2020 ರಂದು ರಾತ್ರಿ 11-20 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಇದರ ಹೊರತಾಗಿ ಸದರಿಯವಳ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಇಂದು ಮೃತ ದೀಪಕಸಿಂಗ ತಂದೆ ಪ್ರತಾಪಸಿಂಗ್ ರಜಪೂತ ವಯಾ 40 ವರ್ಷ ಸಾ; ಮುಮ್ಮಿಗಟ್ಟಿ ತಾಂಡಾ ಇವನು ಮಧ್ಯ ವ್ಯಸನಿ ಇದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಮುಮ್ಮಿಗಟ್ಟಿ ಅರಣ್ಯ ಪ್ರದೇಶದ ಅಶೋಕ ಗಿಡಕ್ಕೆ ನೂಲಿನ ಹಗ್ಗದಿಂದ ಉರುಲು ಹಾಕಿಕೊಂಡು ದಿನಾಂಕ; 09-02-2020 ರ ಬೆಳಗಿನ 5 ಗಂಟೆಯಿಂದ 1000 ಗಂಟೆಯ ನಡುವಿನ ಅವಧಿಯಲ್ಲಿ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಿರುವುದಿಲ್ಲದಾಗಿ ಸದರಿ ಮೃತನ ಪತ್ನಿಯು ದೂರು ಮಾಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.