ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 10, 2020

CRIME INCIDENTS 10-02-2020


ದಿನಾಂಕ. 10-02-2020 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:10-02-2020 ರಂದು 1700 ಗಂಟೆಯ ಸುಮಾರಿಗೆ  ನವಲಗುಂದದ ಗುಡ್ಡದಕೇರಿಯ ಸ್ಮಶಾನಗಟ್ಟಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ   ಆರೋಪಿತರಾದ  1.ಸುರೇಶ ಭಂಜತ್ರಿ ಹಾಗೂ ಇನ್ನೂ 05 ಜನರು ಕೊಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೇಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಎಂಬ ಜೂಜಾಟವನ್ನು ಆಡುತ್ತಿರುವಾಗ ರೇಡ್ ಕಾಲಕ್ಕೆ 01) ಒಟ್ಟು ರೋಖ ಹಣ 1200=00 ರೂಪಾಯಿಗಳು , 02) 52 ಇಸ್ಪೀಟ್ ಎಲೆಗಳು  ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2020 ಕಲಂ 87 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾಡನಕೊಪ್ಪ ಗ್ರಾಮದ ಹನುಮಂತ ದೇವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನಾದ 1) ಪರಸಪ್ಪ ತಂದೆ ಮಹದೇವಪ್ಪ ಕುಳ್ಳೆನವರ ವಯಾ:59 ವರ್ಷ, ಜಾತಿ:ಹಿಂದೂ ಮರಾಠ, ಉದ್ಯೋಗ: ಒಕ್ಕಲುತನ, ಸಾ|| ಕಾಡನಕೊಪ್ಪ. ತಾ|| ಕಲಘಟಗಿ. ಒಂದು ಕೈ ಚೀಲವನ್ನು ಇಟ್ಟುಕೊಂಡಿದ್ದು ಕೈಚೀಲದಲ್ಲಿ ಕೈ ಹಾಕಿ ಮದ್ಯದ ಟೆಟ್ರಾ ಪಾಕೀಟಗಳನ್ನು ಜನರಿಗೆ ಕೊಡುತ್ತಿರುವುದು ಸಿಕ್ಕಿದ್ದು ಅವನಿಂದ 1) ಓರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ತುಂಬಿದ 90 ಎಂ.ಎಲ್ ದ ಒಟ್ಟು 56 ಟೆಟ್ರಾ ಪಾಕೇಟ್ಗಳು ತಲಾ ಒಂದರ ಬೆಲೆ 30.32/-ರೂ ಒಟ್ಟು ಅ.ಕಿ: 1697/- ರೂ ಗಳು. (5 ಲೀಟರ 40 ಮಿ.ಲೀ)  ವಶಪಡಿಸಿಕೊಂಡಿದ್ದು ಇರುತ್ತದೆ ಈ  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2020 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.


3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:09-02-2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:10-02-2020 ರ ಮುಂಜಾನೆ 06-00 ಗಂಟೆ ನಡುವಿನ ಅವಧಿಯಲ್ಲಿ ಶಾಂತವ್ವ ಕೋಂ ಬಸಪ್ಪ ನರೇಂದ್ರ ವಯಾ 50 ವರ್ಷ ಜಾತಿ ಹಿಂದು ಲಿಂಗವಂತ ಕೆಲಸ ಮನೆಯ ಕೆಲಸ ಸಾ..ಯರಿಕೊಪ್ಪ ತಾ..ಧಾರವಾಡ ಇವಳು ನಾನು ಯರಿಕೊಪ್ಪ ಗ್ರಾಮದಲ್ಲಿ ಸ್ವಸಾಹಯ ಸಂಘದಲ್ಲಿ ಸಾಲಮಾಡಿದ ಬಗ್ಗೆ ಮತ್ತು  ತನ ಮಗಳು ಗಂಡನ ಮನೆಯಿಂದ ಬಂದು ತವರ ಮನೆಯಲ್ಲಿ ಇದ್ದ ಬಗ್ಗೆ ಮಾನಸಿಕಮಾಡಿಕೊಂಡು  ಜೀವನದಲ್ಲಿ ಜಿಗುಪ್ಸೆಹೊಂದಿ ತನಷ್ಟಕ್ಕೆ ತಾನೆ ವರದಿಗಾರನ ಮನೆಯ ಕಟ್ಟೆ ಮೇಲೆ ಇರುವ ಕಬ್ಬಿಣ ರಾಡಿಗೆ ಪತ್ತಲ ಸಾಹಯದಿಂದ  ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ವಿನ: ಅವನ ಸಾವಿನಲ್ಲಿ ಬೇರೆ ಏನು ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಗಂಡ ಕೊಟ್ಟ ವರದಿಯನ್ನು ಸ್ವಿಕರಿಸಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಯು ಡಿ ನಂ 08/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದಕ್ಕೆ ದಾಖಲು ಮಾಡಿದ್ದು ಇರುತ್ತದೆ ಈ ಕುರಿತು  ಇರುತ್ತದೆ.