ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 12, 2020

CRIME INCIDENTS 12-02-2020ದಿನಾಂಕ. 12-02-2020 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ  ದಿನಾಂಕ:11-02-2020 ರಂದು ಸಂಜೆ 6-45 ಗಂಟೆ ಸುಮಾರಿಗೆ ಧಾರವಾಡ ಸವದತ್ತಿ ರಸ್ತೆಯ ಮೇಲೆ ಅಮ್ಮಿನಭಾವಿ ಹತ್ತಿರ FIAT ಕಂಪನಿಯ Piunto ಕಾರ ನಂ:KA-25/Z-0869  ನೇದ್ದರ ಚಾಲಕ ಗಜೇಂದ್ರ ಮಹದೇವ ಜರತಾರಗರ ಸಾ:ಗೋಕುಲ ರೋಡ ಹುಬ್ಬಳ್ಳಿ ಇತನು ಚಲಾಯಿಸುತ್ತಿದ್ದ ಕಾರನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು, ಧಾರವಾಡ ಕಡೆಯಿಂದ ಕಬ್ಬೇನೂರ ಕಡೆಗೆ ರಸ್ತೆ ಎಡಸೈಡಿನಲ್ಲಿ ಪಿರ್ಯಾದಿ ಚಲಾಯಿಸಿಕೊಂಡು ಹೋಗುತ್ತಿದ್ದ ವಾಗೆನರ ಕಾರ ನಂ:KA-41/M-6416 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಕಾರನಲ್ಲಿದ್ದ 1) ಅಡಿವೆಪ್ಪ ಮಲ್ಲಪ್ಪ ದೊಡವಾಡ ಸಾ: ಕಬ್ಬೆನೂರ ತಾ:ಧಾರವಾಡ  2) ಬಸನಗೌಡ ಭರಮಗೌಡ ಭರಮಗೌಡ್ರ ಸಾ: ಕಬ್ಬೆನೂರ ತಾ:ಧಾರವಾಡ ಇವರಿಗೆ ಗಂಬಿರ ಗಾಯಪಡಿಸಿ, ತನ್ನ ಕಾರನಲ್ಲಿದ್ದ ಪ್ರಯಾಣಿಕರಾದ ಮಹದೇವ ಗುರುನಾಥ ಜರತಾರಗರ, ಶಶಿಕಲಾ ಕೊಂ ಮಹದೇವ ಜರತಾರಗರ, ಸಚಿನ ಮಹದೇವ ಜರತಾರಗರ, ಸುಮಂಗಲಾ ತಂದೆ ಮಹದೇವ ಜರತಾರಗರ ಸಾ: ಎಲ್ಲರೂ ಗೋಕುಲ ರೋಡ ಹುಬ್ಬಳ್ಳಿ ಇವರಿಗೆ ಸಾದಾ ವ ಗಂಭಿರ ಗಾಯಪಡಿಸಿದಲ್ಲದೇ ತನಗೂ ಸಾದಾ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕುಂದಗೋಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ  ಮೃತನಾದ ಕರಿಯಪ್ಪ ತಂದೆ ಲಕ್ಷ್ಮಪ್ಪ ಚಲವಾದಿ ವಯಾ 55 ವರ್ಷ ಜಾತಿ ಹಿಂದು ಚಲವಾದಿ ಉದ್ಯೋಗ ಶೇತ್ಕಿ ಕೆಲಸ ಸಾ:ಹಾಳಕುಸುಗಲ್ ತಾ: ನವಲಗುಂದ ಇತನು ಕಳೆದ 03 ವರ್ಷಗಳ ಹಿಂದೆ  ಪಡೆಸೂರ ಗ್ರಾಮದ ಸಿಂಡಿಕೇಟ ಬ್ಯಾಂಕಿನಲ್ಲಿ 1,20,000/- ರೂ (ಒಂದು ಲಕ್ಷ ಇಪ್ಪತ್ತು ಸಾವಿರ) ರೂಪಾಯಿಗಳ ಸಾಲವನ್ನು ಮಾಡಿದ್ದು ಮತ್ತು ಊರಲ್ಲಿ ಕೈಗಾಡ ಅಂತಾ 25-30 ಸಾವಿರ ರೂಪಾಯಿಗಳ ಸಾಲವನ್ನು ಮಾಡಿದ್ದು ಈ ಮಾಡಿದ ಸಾಲವನ್ನು ಹೇಗೆ ತಿರಿಸುವದು  ಅಂತಾ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ  ದಿನಾಂಕ 11-02-2020 ರಂದು ರಾತ್ರಿ 23-00 ಗಂಟೆಯಿಂದ ದಿನಾಂಕ 12-02-2020 ರಂದು ಬೆಳಗಿನ 05-00 ಗಂಟೆಯ ಮದ್ಯೆದ ಅವದಿಯಲ್ಲಿ ತನ್ನ ವಾಸದ ಮನೆಯ ಬಚ್ಚಲು ಮನೆಯಲ್ಲಿ ಜಂತ್ತಿಗೆ ಹಗ್ಗವನ್ನು ಕಟ್ಟಿ ಅದೆ ಹಗ್ಗದಿಂದ ತನ್ನಷ್ಠಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ವಿನಃ ಸದರಿ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.