ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 13, 2020

CRIME INCIDENTS 13-02-2020

ಧಾರವಾಡ ಜಿಲ್ಲೆಯಲ್ಲಿದಿನಾಂಕ:13-02-2020 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ12-02-2020 ರಂದು ಸಾಯಂಕಾಲ 17-00 ಗಂಟೆಯ ಸುಮಾರಿಗೆ ಅಳ್ನಾವರದ ಕಡಬಗಟ್ಟಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತನಾದ ವಿಠ್ಠಲ ತಂದೆ ಶಿವಾಜಿ ಭಡಸ್ಕರ, ವಯಾ 30 ಜಾತಿ ಹಿಂದೂ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ :ಅಳ್ನಾವರ ಕಡಬಗಟ್ಟಿ ಕ್ರಾಸ್ ಗಣೇಶ ಹೊಟೇಲ್ ಹಿಂದೆ ತಾ :ಅಳ್ನಾವರ ಅವನು ತನ್ನ ಫಾಯದೇಗೋಸ್ಕರ  ಅಂಕಿ ಸಂಖ್ಯೆಗಳ ಆಧಾರದ ಮೇಲೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿಗಳು ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣ ಇಸಿದುಕೊಂಡು ಓ. ಸಿ. ಎಂಬ ಮಟಕಾ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿಯವನಿಗೆ 1] ರೋಕ ರಖಂ 350/- ಗಳು 2] ಒಂದು ಬಾಲ್ ಪೆನ್ ಹಾಗೂ 3] ಒಂದು ಬಿಳಿ ಹಾಳೆ ಅದರಲ್ಲಿ ಅಂಕಿ ಸಂಖ್ಯೆ ಬರೆದಿದ್ದವುಗಳನ್ನು ವಶಪಡಿಸಿಕೊಂಡು  ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2020 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 13-02-2020 ರಂದು ಮದ್ಯಾಹ್ನ 1-30 ಗಂಟೆಗೆ ಹಳ್ಳ್ಯಾಳ ಗ್ರಾಮದ ಶಾಲೆಯ ಹತ್ತಿರ ರೋಡ ಹಂಪ್ಸನಲ್ಲಿ 407 ಗೂಡ್ಸ್ ಲಾರಿ ನಂ: KA 25 / AA 5749 ರ ಚಾಲಕ ವ, ಆರೋಪಿತನಾದ ಮಲ್ಲಪ್ಪ ದ್ಯಾವಪ್ಪ ಕೋರಿ ಸಾ: ತಡಹಾಳ ತಾ: ನವಲಗುಂದ ಈತನು ಸದರ ಲಾರಿಯನ್ನು ಅತೀ ವೇಗ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ರೋಡ ಹಂಪ್ಸ್ ಗೆ ಲಾರಿ ಪುಟಿದು ಹಿಂದೆ ಕುಳಿತಿದ್ದ ಪಿರ್ಯಾದಿಯ ತಂದೆ ಮಾನಪ್ಪ ಮಳಿಯಪ್ಪ ಬಡಿಗೇರ ವಯಾ: 67 ವರ್ಷ ಹಾಗೂ 1) ಶೇಖರಪ್ಪ ದೊಡ್ಡಬಸಪ್ಪ ಕಿಟಗೇರಿ 2) ಸಿದ್ದನಗೌಡ ಅಜ್ಜನಗೌಡ ಕ್ಯಾಮನಗೌಡ್ರ 3) ದ್ಯಾವನಗೌಡ ಕಲ್ಲನಗೌಡ ಚನವೀರಗೌಡ್ರ 4) ಮಲಕಾಜಪ್ಪ ದೊಡ್ಡಬಸಪ್ಪ ಕಿಟಗೇರಿ ಸಾ: ಎಲ್ಲರೂ ತಡಹಾಳ ತಾ: ನವಲಗುಂದ ಇವರು ಪುಟಿದು ಕೆಳಗೆ ಬೀಳುವಂತೆ ಮಾಡಿ ಅವರಿಗೆ ಸಾದಾ ವ, ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ ಪಿರ್ಯಾದಿಯ ತಂದೆ ಮಾನಪ್ಪ ಬಡಿಗೇರ ಇವರನ್ನು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಕಿಮ್ಸ್ ಆಸ್ಪತ್ರೆಯ ಹತ್ತಿರ ದಿನಾಂಕ: 13-02-2020 ರಂದು ಮದ್ಯಾಹ್ನ 2-30 ಗಂಟೆಗೆ ಮರಣವಾಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2020 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.  ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಪ್ರಭುನಗ ಹೊನ್ನಾಪುರ ಗ್ರಾಮದ  ನೇತ್ರಾವತಿ ಕೋಂ ಸೂರಜ ಸೂರ್ಯವಂಶಿ, ವಯಾ 24 ವರ್ಷ, ಜಾತಿ ಹಿಂದು ಹೊಲೆಯರ, ಉದ್ಯೋಗ ಮನೆಗೆಲಸ, ನೀಲಜಿ ಗ್ರಾಮ, ತಾ:ಗಡಹಿಂಗ್ಲಜ, ಜಿ:ಕೊಲ್ಲಾಪುರ, ರಾ:ಮಹಾರಾಷ್ಟ್ರ ಹಾಲಿ ಪ್ರಭುನಗರ ಹೊನ್ನಾಪುರ, ಸಿದ್ಧಾರೂಢ ಓಣಿ, ಜೈ ಭೀಮ ನಗರ, ತಾ:ಅಳ್ನಾವರ ದಿನಾಂಕ:11-01-2015 ರಂದು ಸೂರಜ ಬಸವಂತ ಸೂರ್ಯವಂಶಿ, ಸಾ:ನೀಲಜಿ ಗ್ರಾಮ, ತಾ:ಗಡಹಿಂಗ್ಲಜ ಇವರೊಂದಿಗೆ ಹಿರಿಯರ ಸಮಕ್ಷಮ ಜಾತಿ ಪದ್ಧತಿಯಂತೆ ಮದುವೆಯಾಗಿದ್ದು, ತಮಗೆ ಈಗ 1)ಸಾಹಿತ್ಯಾ, ವಯಾ 4 ವರ್ಷ, 2)ಜಯಸ್, ವಯಾ 2 ವರ್ಷ ಮಕ್ಕಳಿರುತ್ತಾರೆ. ತನಗೆ ಹಾಗೂ ತನ್ನ ಗಂಡ ಮತ್ತು ಗಂಡನ ಮನೆಯವರೊಂದಿಗೆ ಹೊಂದಾಣಿಕೆಯಾಗದ್ದರಿಂದ ಹಾಗೂ ಅವರು ತನಗೆ ದೈಹಿಕ & ಮಾನಸಿಕವಾಗಿ ಕಿರಿಕಿರಿ ಮಾಡಿದ್ದರಿಂದ ತಾನು ತನ್ನ ಗಂಡನ ಮನೆಯಿಂದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು, ತನಗೆ ಪಾಲನೆಪೋಷಣೆ ಮಾಡಿದ ತಮ್ಮ ಮಾವ ಭೀಮಪ್ಪ ಈರಬಸು ದೊಡಮನಿ ಇವರ ಮನೆಗೆ ಪ್ರಭುನಗರ ಹೊನ್ನಾಪುರಕ್ಕೆ ಬಂದು ಸುಮಾರು 2 ತಿಂಗಳಿಂದ ತಮ್ಮ ಮಾವನ ಮನೆಯಲ್ಲೇ ವಾಸವಾಗಿದ್ದು, ಮೊನ್ನೆ ದಿನಾಂಕ:11.02.2020 ರಂದು ಮಧ್ಯಾಹ್ನ 2-00 ಗಂಟೆಯಿಂದ 2-30 ಗಂಟೆಯ ನಡುವಿನ ವೇಳೆಯಲ್ಲಿ ಮನೆಯ ಮುಂದೆ ಅಂಗಳದಲ್ಲಿ ಆಟವಾಡುತ್ತಿದ್ದ ತನ್ನ ಮಕ್ಕಳಾದ 1)ಸಾಹಿತ್ಯಾ, ವಯಾ 4 ವರ್ಷ, 2)ಜಯಸ್, ವಯಾ 2 ವರ್ಷ ಇವರಿಗೆ ಯಾರೋ ಏನೋ ಆಸೆ ತೋರಿಸಿ ಯಾವುದೋ ಕಾರಣಕ್ಕಾಗಿ ಎಲ್ಲೋ ಅಪಹರಿಸಿಕೊಂಡು ಹೋಗಿದ್ದು, ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2020 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಸಿ.ಇ.ಎನ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ:08-02-2020 ರಂದು ಮುಂಜಾನೆ 09-54 ಗಂಟೆ ಸುಮಾರಿಗೆ ಪಿರ್ಯಾದಿ ಮಗನಾದ ತೇಜಶ ಇತನ ಮೊಬೈಲ ನಂಬರ 9380601857 ನೇದ್ದಕ್ಕೆ ಆರೋಪಿ ಅನುಪಕುಮಾರ ಎಂಬುವನು ತನ್ನ ಮೊಬೈಲ ನಂ 7500943942 ನೇದ್ದರಿಂದ ಕರೆ ಮಾಡಿ ನಿಮ್ಮಗೆ ಜಿಯೋ ಆಫರ ಕೆಬಿಸಿ ಕೌನಬನೆಗಾ ಮಹಾ ಕರೋಪತಿಯಿಂದ ನಿಮ್ಮ ಮೊಬೈಲ ನಂಬರ 9380601857 ನೇದ್ದಕ್ಕೆ ರೂ 25,00,000=00 ರೂ ಗಳು ಬಹುಮಾನ ಬಂದಿದ್ದು ಅದನ್ನು ನೀವು ಪಡೆದುಕೊಳಲು ಕೇಲವೊಂದು ಚಾರ್ಜ ಕಟ್ಟಬೇಕಾಗುತ್ತೇ ಅಂತಾ ಹೇಳಿ ಪಿರ್ಯಾದಿ ಕಡೆಯಿಂದ ಹಂತ ಹಂತವಾಗಿ ವಿವಿಧ ದಿನಾಂಕಗಳಂದು ರೂ 1,28,100-00 ರೂ ಗಳನ್ನು ವಿವಿಧ ಬ್ಯಾಂಕ ಖಾತೆಗಳಿಗೆ ಜಮಾ ಮಾಡಿಸಿಕೊಂಡು ಮೋಸ ಮಾಡಿದ್ದು ಇರುತ್ತದೆ.ಈ ಕುರಿತು ಧಾರವಾಡ ಸಿ.ಇ ಎನ್ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2020 ಕಲಂ INFORMATION TECHNOLOGY  ACT 2000 (U/s-66(C)); IPC 1860 (U/s-420) ನೇದ್ದರಲ್ಲ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸತೇಗೂರ ಗ್ರಾಮದ  ಮೃತ ಸಿದ್ದಯ್ಯ ತಂದೆ ಗುರುವಯ್ಯ ಬಿಡಿಮಠ ವಯಾ 48 ವರ್ಷ ಜಾತಿ ಹಿಂದು ಜಂಗಮ ಕೆಲಸ ಶೇತ್ಕಿ ಸಾ..ಹೊಸತೇಗೂರ ತಾ..ಧಾರವಾಡ ಇತನು ದಿನಾಂಕ 12-02-2020 ರಂದು ಬೆಳಗ್ಗೆ11 ಗಂಟಯಿಂದ ರಾತ್ರಿ 9-30 ಗಂಟೆ ನಡುವಿನ ಅವಧಿಯಲ್ಲಿ ದುರ್ಗದಕೆರಿ ಗ್ರಾಮದ ಹದ್ದಿಯಲ್ಲಿರುವ ನಮ್ಮ ಜಮೀನ ಸರ್ವೆ ನಂ 100/7 ಕ್ಷೆತ್ರ 4 ಎಕರೆ ಜಮ್ಮಿನನಲ್ಲಿ ಹಿಂಗಾರು ಮತ್ತು ಮುಂಗಾರು ಪೀಕ್ ಸರಿಯಾಗಿ ಬಾರದೇ ಕೃಷಿ ಚಟವಟಿಕೆಗೆ ಕೆ ವಿ ಜಿ ಬ್ಯಾಂಕ ಹೊಸತೇಗೂರನಲ್ಲಿ ಮಾಡಿದ ಸಾಲ ತೀರಿಸಲಾಗದೆ ಮಾನಸಿಕ ಅಸ್ಥಿತಿಯಲ್ಲಿ ಹೋಲದಲ್ಲಿ ಮನೆಯ ಜಂತ್ತಿಗೆ ನನ್ನ ಗಂಡ ತನ್ನಷ್ಟಕ್ಕೆ ತಾನೆ ವಾಯರ ಹಗ್ಗದಿಂದ ನೇಣಿ ಹಾಕ್ಕಿಕೊಂಡು ಮೃತಪಟ್ಟಿದ್ದು  ಇರುತ್ತದೆ. ಅಂತಾ ಮೃತನ ಹೆಂಡತಿ ಈ ಸಾವಿನಲ್ಲಿ ನನ್ನದು ಯಾವುದೆ ಸಂಶಯ ವ ಗೈರೆ ಇಲ್ಲಾ ಅಂತಾ ಕೊಟ್ಟ ವರದಿಯನು ಸ್ವಿಕರಿಸಿಕೊಂಡು ನಮ್ಮ ಠಾಣಾ ನಂ 10/2020 ಕಲಂ 174 ಸಿ ಆರ್ ಪಿ ಸಿ ನೇದ್ದಕ್ಕೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.