ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 2, 2020

CRIME INCIDETNS 02-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:02-02-2020 ರಂದು ವರದಿಯಾದ ಪ್ರಕರಣಗಳು

1 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:02-02-2020 ರಂದು ಬೆಳಗ್ಗೆ 09:30 ಗಂಟೆಯ ಸುಮಾರಿಗೆ  ಕಲಘಟಗಿ ಪಟ್ಟಣದ ಹನ್ನೆರಡು ಮಠದ ಮುಂದಿನ ಕಲಘಟಗಿ ಹುಬ್ಬಳ್ಳಿ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ. ಆರೋಪಿತರಾದ 1) ಮಂಜುನಾಥ ತಂದೆ ವೀರನಗೌಡ ಪಾಟೀಲ, 30 ವರ್ಷ, ಗೌಂಡಿ ಕೆಲಸ, ರೆಡ್ಡಿ ಜನಾಂಗ, ಸಾ|| ಮುಕ್ಕಲ್ ಗ್ರಾಮ, ತಾ|| ಕಲಘಟಗಿ ಇವರು ತಮ್ಮ ಬಳಿ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಅನಧಿಕೃತವಾಗಿ ಒಟ್ಟು 5821/- ರೂ ಕಿಮ್ಮತ್ತಿನ 1) ಒರಿಜಿನಲ್ ಚಾಯ್ಸ್ ಡಿಲಕ್ಸ ವಿಸ್ಕಿ ತುಂಬಿದ 90 ಎಂ.ಎಲ್ ದ 192 ಟೆಟ್ರಾ ಪಾಕೇಟ್ಗಳು ಇದ್ದು ಇವುಗಳು ಒಟ್ಟು 17 ಲೀಟರ್ 280 ಎಮ್ಎಲ್ ನೇದ್ದವುಗಳನ್ನು  ಕೆಎ-25/ಇ-3206 ನೇ ಹಿರೋ ಹೊಂಡಾ ಸಿಡಿ 100 ಮೋಟಾರು ಸೈಕಲ್ಲಿನ ಮೇಲೆ ತನ್ನ ಮುಕ್ಕಲ್ ಗ್ರಾಮದ ಸಾರ್ವಜನಿಕ ಜನರಿಗೆ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2020 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 01-02-2020 ರಂದು 23-00 ಗಂಟೆಯಿಂದ ದಿನಾಂಕ: 02-02-2020 ರಂದು ಬೆಳಗಿನ 05-00 ಗಂಟೆ ಮದ್ಯದಲ್ಲಿ ನಿಂಗಪ್ಪಾ ತಟ್ಟಪ್ಪಣವರ ಇವರ ಹೊಲದಲ್ಲಿ ಗೋವಿನ ಜೋಳ ಕಟಾವು ಮಾಡಿಸಿ ರಾಶಿ ಹಾಕಿದ್ದರಲ್ಲಿ ಯಾರೋ ಕಳ್ಳರು ಗೋವಿನ ಜೋಳದ ರಾಶಿಯಲ್ಲಿ 3-4 ಚೀಲದಷ್ಟು ಗೋವಿನ ಜೋಳ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2020 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 02-02-2020 ರಂದು ಬೆಳಗಿನ 00-30 ಗಂಟೆ ಸುಮಾರಿಗೆ ದಾರವಾಡ ಹುಬ್ಬಳ್ಳಿ ಬೈಪಾಸ ರಸ್ತೆಯ ನರೇಂದ್ರ ಟೋಲ ಸಮೀಪ ರಸ್ತೆಯ ಮೇಲೆ ಲಾರಿ ನಂ ಕೆ.ಎ 22/ಡಿ-1294 ನೇದ್ದರ ಚಾಲಕನಾದ ಯಾಸಿನ ತಂದೆ ದಾದಾಪೀರ ತಾಳಿಕೋಟಿ 27 ವರ್ಷ ಸಾ|| ಸಂಪಗಾಂವ ತಾ|| ಬೈಲಹೊಂಗಲ ಜಿ|| ಬೆಳಗಾಂವ ಅವನು ತಾನು ನಡೆಸುತ್ತಿದ್ದ ಲಾರಿಯನ್ನು ದಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ ಲಾರಿಯ ಕ್ಯಾಬಿನ ಮೇಲೆ ಮಲಗಿಕೊಂಡಿದ್ದ ನಮ್ಮ ಅಣ್ಣನಾದ ಅದ್ರುಶ ತಂದೆ ಈರಪ್ಪ ಶಿಗಿಹಳ್ಳಿ 40 ವರ್ಷ ಸಾ|| ಸಂಪಗಾಂವ ತಾ|| ಬೈಲಹೊಂಗಲ ಜಿ|| ಬೆಳಗಾಂವ ಅವನಿಗೆ ಪುಟಿಸಿ ನೆಲಕ್ಕೆ ಕೆಡವಿ ಅಪಘಾತ ಪಡಿಸಿ ಸ್ಥಳದಲ್ಲಯೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2020 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.