ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
DAILY CRIME REPORT OF DHARWAD DISTRICT

Sunday, June 20, 2021

CRIME INCIDENTS 20--06-2021

 

ಧಾರವಾಡ ಜಿಲ್ಲೆಯಲ್ಲಿದಿನಾಂಕ:20-06-2021 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಆರೋಪಿತನಾದ ಯಶವಂತ ತಂದೆ ಚಿಂತಾಮನಿ ಕಲಾಲ ವಯಾ 62 ವರ್ಷ ಜಾತಿ ಹಿಂದು ಕಲಾಲ ಉದ್ಯೋಗ ಕೂಲಿ ಕೆಲಸ ಸಾ;ಬಸವೇಶ್ವರ ನಗರ ನವಲಗುಂದ ಇತನು    ದಿನಾಂಕ 20-06-2021 ರಂದು 16-00 ಗಂಟೆಯ ಸುಮಾರಿಗೆ ನವಲಗುಂದದ ಬಸವೇಶ್ವರ ನಗರದ ದ್ಯಾಮವ್ವನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಪಾಯ್ದಿಗೋಸ್ಕರ ಯಾವುದೆ ಪಾಸು ವ ಪರ್ಮಿಟ್ ಇಲ್ಲದೆ ಅನದೀಕೃತವಾಗಿ 1) 10 ಓರಿಜಿನಲ್ ಚ್ವಾಯಿಸ್ ಡೀಲಕ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅಕಿ 350/ ರೂ 02) ಒಂದು ಬಿಳಿ ಚೀಲಾ ಅಕಿ: 0000/ ರೂ 03) ಎರಡು ಸಣ್ಣ ಪ್ಲಾಸ್ಟೀಕ ಗ್ಲಾಸಗಳು ಅಕಿ:  00/- ರೂ ನೆದ್ದವುಗಳನ್ನು ಇಟ್ಟುಕೊಂಡು ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಾಗ ಧಾಳಿ ಕಾಲಕ್ಕೆ ಸಿಕ್ಕಿದ್ದುಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 105/2021 ಕಲಂ 32(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

 

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ  ಗ್ರಾಮದ ಮೃತ ನನ್ನ ಗಂಡ ದಾವಲಸಾಬ ತಂದೆ ಅಲ್ಲಾಸಾಬ ದೊಡಮನಿ ವಯಾ: 28 ವರ್ಷ ಇತನು  ನಮ್ಮ ಮನೆಯ ಜವಾಬ್ದಾರಿನ್ನು ನಿರ್ವಹಿಸುತ್ತಿದ್ದು ಹಾಗೂ ನಮ್ಮ ಬಾಬತ್ತ ಹೊಲದ ಹಾಗೂ ಲಾವಣಿ ಹೊಲದ ಉಳುಮೆಗಾಗಿ ಹಾಗೂ ಮನೆಯ ಖರ್ಚಿನ ಸಲುವಾಗಿ ಹುಬ್ಬಳ್ಳಿಯ ಇಕ್ವೀಟ್ ಬ್ಯಾಂಕದಲ್ಲಿ 3,74,000/- ರೂ ಸಾಲ ಮಾಡಿಕೊಂಡಿದ್ದು ಆದರೆ ಈಗ  3-4 ವರ್ಷಗಳಿಂದ ಸರಿಯಾಗಿ ಮಳೆ ಬೆಳೆ ಆಗದ್ದರಿಂದ ಹಾಗೂ ಈ ವರ್ಷ ಅತಿಯಾಗಿ ಮಳೆಯಾಗಿ ಹಾಕಿದ ಪೀಕು ಕೈಗೆ ಬಾರದ್ದರಿಂದ ಮುಂದೆ ಜೀವನ ನಡೆಸುವುದು ಹೇಗೆ, ತಾನು ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಹೊಂದಿ ತನ್ನಷ್ಟಕ್ಕೆ ತಾನೇ ನಮ್ಮ ವಾಸದ ಮನೆಯಲ್ಲಿ ಮೊನ್ನೆ ದಿವಸ ದಿನಾಂಕ: 18-06-2021  ರಂದು ರಾತ್ರಿ 8-00 ಗಂಟೆಗೆ ಯಾವುದೇ ವಿಷಕಾರಕ ಪದಾರ್ಥವನ್ನು ಸೇವನೆ ಮಾಡಿ ತ್ರಾಸಮಾಡಿಕೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದವನು ಉಪಚಾರ ಫಲಿಸದೇ ನಿನ್ನೆ ದಿವಸ ದಿನಾಂಕ: 19-06-2021 ರಂದು ಸಾಯಂಕಾಲ 7-25 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ನನ್ನ ಗಂಡನ ಮರಣದಲ್ಲಿ ನನ್ನದು ಯಾವುದೇ ಸಂಶಯ ವಗೈರೆ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅದೆ ಅಂತಾ ಮೃತನ  ಹೆಂಡತಿ ಠಾಣೆಯಲ್ಲಿ ವರದಿ ನೀಡಿದ್ದು  ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ  ಯುಡಿನಂ 22/2021 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

 

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ  ಮಂಜುಳಾ ಕೋಂ ಚನ್ನಯ್ಯ ಅಣ್ಣಿಗೇರಿಮಠ ವಯಾಃ 40 ವರ್ಷ ಜಾತಿಃ ಹಿಂದೂ ಜಂಗಮ ಉದ್ಯೊಃ ಚಹಾದ ಅಂಗಡಿ ವ್ಯಾಪಾರ ಸಾಃ ಶೇರೆವಾಡ ತಾಃ ಹುಬ್ಬಳ್ಳಿ ಇವಳು ಮಹಿಳಾ ಸಂಘಸಂಸ್ಥೆಗಳಲ್ಲಿ ಬ್ಯಾಂಕಗಳಲ್ಲಿ ಹಾಗೂ ಕೈಗಡೆ ಸಾಲ ವಗೈರೆ ಕಡೆಗಳಲ್ಲಿ ಮಾಡಿದ್ದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ನಿನ್ನೆ ದಿವಸ ದಿನಾಂಕ 19-06-2021 ರಂದು ರಾತ್ರಿ 10-30 ಗಂಟೆಯಿಂದ ಈ ದಿವಸ ದಿನಾಂಕಃ 20-06-2021 ರಂದು ಬೆಳಗಿನ 6-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನದೆ ಚಹಾದ ಅಂಗಡಿಯ ಮೇಲ್ಚಾವಣೆಯ ಕಬ್ಬಿಣದ ಎಂಗ್ಲರಿಗೆ ವೇಲಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ವಿನಃ ಅವಳ ಮರಣದಲ್ಲಿ ನನ್ನದು ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ವರದಿಗಾರನ ವರದಿಯನ್ನು ನೀಡಿದ್ದುಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 33/2021 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ